ದೀಪದ ಮಲ್ಲಿ ............. ಕವನ ಸಂಕಲನ- ದೀಪದ ಮಲ್ಲಿ ಎಲೆಲೆ! ದೇಪದ ಮಲ್ಲಿ, ಎದೆಯ ಕತ್ತಲೆಯಲ್ಲಿ ಪದುಮ ದೀಪದ ಹಿಡಿದು ಬಾಗಿ ನಿಂತು ಕವಿಗಿನಿತೆ ಬೆಳಕಿನಲ್ಲಿ ಎಂಬ ಕಿರುನಗೆಯಲ್ಲಿ ಹಿಗ್ಗಿ ಹೂವಾಯ್ತಿಂತು ಪ್ರಾಣ ತಂತು. ನೀನೆ ಕಂಚಿನ ಬೊಂಬೆ ? ಅಲ್ಲ ಮಿಂಚಿನ ಬೊಂಬೆ ? ಹಂಬಲವನೆದೆಯೊಳಗೆ ತುಂಬಿದೊಲುಮೆ. ಎಲ್ಲಿತ್ತೊ ಒಂದು ದನಿ, ಎಲ್ಲಿತ್ತೊ ಒಂದು ಬನಿ, ನಿನ್ನಿಂದ ಹಾಡಾಯ್ತು ಅಮೃತವಾಯ್ತು. -ಕೆ ಎಸ್ ನರಸಿಂಹಸ್ವಾಮಿಯವರು